ನಾವು ಬದುಕಿನಲ್ಲಿ ಹಾಗೆ ಸುಮ್ಮನೆ ನಡೆದು ಬಂದಿರುತ್ತೇವೆ.
ಆ ದಾರಿಯಲ್ಲಿ ನಮಗೆ ಅರಿವಿಲ್ಲದೆ ಏನನ್ನೋ ಹೊತ್ತು ತಂದಿರುತ್ತೇವೆ..
ಅದಕ್ಕೆ "ನೆನಪು" ಎಂದು ಹೆಸರು ಕೂಡ ಕೊಟ್ಟು ಬಿಡುತ್ತೇವೆ.
ಜಗತ್ತಿಗಿಂತಲೂ ನಾವು ಅತಿಯಾಗಿ ಪ್ರೀತಿಸುವ ಅಪ್ಪ ಅಮ್ಮ,, ಅಜ್ಜ ಅಜ್ಜಿ..
ಮನೆಯ ಯಾರೋ ಒಬ್ಬರು,, ದಾರಿಯಲ್ಲಿ ಸಿಕ್ಕು ಮರೆಯಾಗುವ ಮಂದಿ..
"ಏಳು ಜನ್ಮಕು ನಿನ್ನ ಜೋತೆಗಿರುವೆ ಕಣೋ " ಎಂದು ಬರುವ ಹುಡುಗಿ/ಗ.
ಜೊತೆಯಲ್ಲಿ ಬೆಳೆದ ಚಡ್ಡಿ ದೋಸ್ತಿ. ಒಂದೇ ಬೆಂಚಿನ ಸಹ ಪಾಟಿ..
ಮನೆಯಲ್ಲಿ ಸಾಕಿಟ್ಟ ಮೂಕ ಪ್ರಾಣಿ,
ಹೀಗೆ ಯಾರೋ ಒಬ್ಬರು ನಮ್ಮ ನೆನಪುಗಳಲ್ಲಿ ನೆಲೆ ನಿಂತು ಬಿಡುತ್ತಾರೆ,,
ಒಂಟಿತನದ ಸಂಜೆಗಳಲ್ಲಿ ಕಾದಿಬಿದುತ್ತಾರೆ,
ಅವರ ನೆನಪಾದಾಗಲೆಲ್ಲ ಕಣ್ಣೆಲ್ಲ ಮಂಜು ಮಂಜು,
ಬನ್ನಿ, ನೆನಪುಗಳ ನೆನೆಯೋಣ...
ಒಟ್ಟಾಗಿ ಕುಳಿತು ಗುಟ್ಟು ಹೇಳಿಕೊಳ್ಳೋಣ,,,